ಈಗ್ಗೆ ಬಹಳ ಬಹಳ ವರ್ಷಗಳ ಹಿಂದೆ ನಮ್ಮ ನಮ್ಮ ಊರಿನಲ್ಲಿ ನೆಲೆಸಿದ್ದ ರಾಜರುಗಳು ಅಥವಾ ದೊಡ್ಡ ಮನುಷ್ಯರುಗಳು ತಮ್ಮ ಕಾರುಬಾರುಗಳಿಂದ, ಜನರ ಅಹವಾಲುಗಳಿಂದ, ನೂರಾರು ತೊಂದರೆ, ತೊಡಕುಗಳಿಂದ, ಎಲ್ಲಾ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಅಥವಾ ಕೊಂಚ ಹೊತ್ತು ದೂರವಿರಲು ಒಂದು ರೀತಿಯ ಇಂದಿನ ಭಾಷೆಯಲ್ಲಿ ಹೇಳುವುದಾದರೆ, ಫಾರಂ ಹೌಸ್ ಅಥವಾ ರೆಸೋರ್ಟ್ ಗಳ ರೀತಿ ಕಟ್ಟಿಸಿಕೊಂಡ ಏಕಾಂತ, ಪ್ರಶಾಂತ ಜಾಗಗಳೇ ಇರಬಹುದಾ ನಾನೀಗ ನಿಂತಿರುವ ಈ ಸ್ಪೆಷಲ್ ಥಿಯೇಟರ್ ಅಂತ ಯೋಚಿಸುತ್ತಿರಬೇಕಾದ್ರೆ ಎದುರುಗಡೆ ನಿಂತಿದ್ದ ಅಜ್ಜಿ ಸುಸ್ತಾಗಿ ಅಲ್ಲೆ ಯಾರು ಏನು ಅಂದುಕೊಂಡರೂ ಪರವಾಗಿಲ್ಲ ಅಂತ ಕೂತ್ಕೊಂಡು ಸುಧಾರಿಸಿಕೊಳ್ಳೋಕೆ ಶುರು ಮಾಡ್ತು. ಎರಡು ಘಂಟೆಯಿಂದ ನಿಂತಿದ್ದ ನಮ್ಮ ಸಾಲು ಅಥವಾ queue ನೂರು ಮೀಟರ್ ಮುಂದುವರೆದಿರಬಹುದೇನೋ. ನಾವು ಯಾವ ಕಾಲಕ್ಕೆ, ಬಾಗಿಲು ತಲುಪೋದು show ಎಷ್ಟುಹೊತ್ತಿಗೆ ಶುರುವಾಗೋದು ನೆನೆಸಿಕೊಂಡರೆ ಯಾಕ್ ಬಂದು ಇಲ್ಲಿ ಸಿಗಾಕೊಂಡೆನೋ ಅನ್ನಿಸುತ್ತಿದೆ. ಬಂದಾಯ್ತು ticket ತೊಗೊಂಡಾಯ್ತು ಬೇರೆ ದಾರಿ ಇಲ್ಲ show ಮುಗಿಸಿಕೊಂಡೇ ಮನೆಗೆ ಹೋಗೋದಷ್ಟೆ ಅಂದುಕೊಂಡೆ. ಹೇಳ್ಕೊಳ್ಳೋಕೆ ನಾಲಕ್ಕು ಜನ ಸ್ನೇಹಿತರು ನಿಂತಿದೀವಿ. ಮಾತನಾಡೋಕೆ ಎಷ್ಟು ಅಂತ ವಿಷಯ ಇರುತ್ತೆ. ನಿಂತು ನಿಂತು ಸುಸ್ತಾಗಿನೋ ಇಲ್ಲ ಮಾತೇ ಖಾಲಿಯಾಗಿತ್ತೋ ಒಟ್ಟಿನಲ್ಲಿ ಬಾಯಿಗೆ ಪುರಸೊತ್ತು ಸಿಕ್ಕಿತ್ತು. ಏನ್ ಮಾಡ್ತಿದಾರೆ ಅಂತ ನೋಡಿದ್ರೆ, ನಮ್ಮ ಸಾಲಿನ ಹಿಂದೆ ತಿರುವಿನಲ್ಲಿ ಕಾಣ್ತಿರೋ ಸುಂದರಿಯನ್ನ ನೋಡೋದ್ರಲ್ಲಿ ಎಲ್ಲಾ ಮಕ್ಕಳೂ busy. ಇದೋ ಸಮಾಚಾರ ಅಂತ ಸರಿ ನನ್ನ ಕಣ್ಣಿಗೆ ಮತ್ತೆ ಕೆಲಸ ಕೊಟ್ಟೆ, ಕೆಲವರು ಮೊಬೈಲ್ ನಲ್ಲಿ, ಕೆಲವರು ನೋಡೋಕ್ ಹೊರಟಿರೋ ಪಿಕ್ಚರ್ ಹೀರೋ ಎಲ್ಲಾ ಸಿನೆಮಾಗಳ ಹಾಡುಗಳನ್ನ ಹಾಡೋದರಲ್ಲಿ, ಇನ್ನ ಕೆಲವರು ನಮ್ಮ ವಯಸ್ಸಿನವರೇ ನಮ್ಮ ತರಹನೇ ಅಲ್ಲಿ ಇಲ್ಲಿ ಚಿಟ್ಟೆಗಳನ್ನ ಕಣ್ಣಲ್ಲೆ ಸರೆಹಿಡಿಯೋದ್ರಲ್ಲಿ ಒಟ್ಟಿನಲ್ಲಿ ಹೆಂಗೋ ಸಮಯ ಕಳಿತಿದ್ರು. ಆದ್ರೆ ಒಂದು ಹೊಟ್ಟೆ ಉರಿತಿದ್ದಿದ್ದು. ಎರಡು ಕಾಲು ಘಂಟೆಯಿಂದ ನಿಂತಿರೋ ನಾವು ಸೆಕೆಂಡೆ ಕ್ಲಾಸ್ ಟಿಕೆಟ್ ತೊಗೊಂಡಿರೋ ಜನ ನಿಂತೇ ಇದೀವಿ ಪಕ್ಕದಲ್ಲಿ ಅದ್ಯಾವ್ದೋ ಬಾಲ್ಕನಿ ಟಿಕೆಟ್ ತರಹ ತೊಗೊಂಡು ಸಲೀಸಾಗಿ ಒಳಗೆ ಹೋಗ್ತಿದಾರೆ. ಥು ನಾವು ಯಾಕ್ ಆ ಬಾಲ್ಕನಿ ಟಿಕೆಟ್ ತೊಗೊಳ್ಳಿಲ್ವೋ ಸುಮ್ಮನೆ ಸಮಯ ವ್ಯರ್ಥ. ಸರಿ ಹಾಗೋ ಹೀಗೋ ತೆವಳೀ ತೆವಳೀ ನಮ್ಮೆದುರಿಗೆ ಇದ್ದ ಅಜ್ಜಿ ಹೆಜ್ಜೆ ನಮಸ್ಕಾರದಂತೆ ಅಲ್ಲಲ್ಲಿ ಕೂತೂ ಕೂತೂ ಹಂಗೂ ಹಿಂಗೂ ಟಿಕೆಟ್ ಹರಿಯುವವನ ಹತ್ತಿರ ಬಂದ್ವಿ ಇಲ್ಲಿವರೆಗೂ ತಾಳ್ಮೆಯಿಂದ ಇದ್ದ ನಮ್ಮ ಜನಕ್ಕೆ ಏನ್ ಬಂತೋ ರೋಗ ನೂಕು ನುಗ್ಗಲು ಶುರುವಾಯ್ತು. ಜಗ್ಗಾಡಿ, ನುಗ್ಗಾಡಿ, ಅವರಿವರ ಮೇಲೆ ಉಚಿತವಾಗಿ ಉಜ್ಜಾಡಿ, ನಮ್ಮ ನಾಲ್ಕೂ ಜನರ ಟಿಕೆಟ್ ಹರಿಸಿ ಒಳಗ ಪ್ರವೇಶ ತೊಗೊಂಡ್ವಿ. ಒಳಗೆ ಹೋದ್ರೆ ಏನು!! ಸ್ಕ್ರೀನ್ ಇಲ್ಲ, DTS sound ಸ್ಪೀಕರ್ ಗಳು ಇದ್ವು, ಒಂದು stage ಅದರ ಮೇಲೆ ಒಬ್ಬ ಹೀರೋ ಅಷ್ಟೇ!!!!!! ಕೊಟ್ಟಿರೋ 100 ರೂಪಾಯಿಗೆ show duration ಎಷ್ಟು ಹೊತ್ತು ಗೊತ್ತ 2 ನಿಮಿಷ ಅಷ್ಟೇ. ಅದರಲ್ಲೂ ಎಷ್ಟೋ ಜನ ಕಣ್ಮುಚ್ಚಿಕೊಂಡೇ ನಿಂತುಬಿಟ್ಟಿದ್ರು. ಅರೆರೆ ಇದ್ಯಾವ ತರಹದ show ರೀ. ಎರಡು ನಿಮಿಷ ಸರಿಯಾಗಿ ನೋಡೋಣ ಅಂದ್ರೆ ಸೆಕ್ಯುರಿಟಿಗಳು ಎಳೆದೆಳೆದು ಇದು Live show not more than 2 mins ಹೊರಡಿ ಅಂತ ನೂಕುತಿದ್ದ. ಹೊರ ಬರೋವಾಗ, ಈ PVRಗಳಲ್ಲಿ cool drinks ಕೊಡೊಹಾಗೆ small drinks ಕೊಟ್ಟು ಕಳಿಸಿದ್ರು. ಅರೆ! ಇಷ್ಟೇನಾ! ಬೇರೆ ತಿಂಡಿಗಳು ತೊಗೊಬೇಕು ಅಂದ್ರೆ ಅದಕ್ಕೆ ಹೆಚ್ಚಿನ ದರ ಕಟ್ಬೇಕಂತೆ. ಥೂ ಭಾರೀ ಮೋಸ ಹೋದ್ವಪ್ಪ ಅನ್ನಿಸಿತು ಹೊರಬರೋವಾಗ. ಆದರೆ ಎಲ್ಲಾ ಹೊರಬರೋವಾಗ ಅದ್ಭುತವಾದ ಸಿನೆಮಾ ನೋಡಿ ಧನ್ಯರಾಗಿ ಹೊರಬರುತ್ತಿರೋ ರೀತಿ ಬರ್ತಿದ್ರು ಅದೇ ಆಶ್ಚರ್ಯ!!! ಈ ದೇವಸ್ಥಾನಗಳು ನಿಜವಾಗಲೂ ನನಗೆ ಹಿಂಗೇ ಕಂಡಿದ್ದು. ಇಲ್ಲಿ Business ಇತ್ತು ಭಕ್ತಿ ಕಾಣಿಸಲಿಲ್ಲ. ಒಳಗಡೆ ಸುಮ್ಮನೆ ಇರೋ “ಹೀರೋ” ದೇವರದ್ದು ಏನ್ ತಪ್ಪಿದ್ಯೋ ಇಲ್ವೋ ಗೊತ್ತಿಲ್ಲ ಆದರೆ ಸುತ್ತ ಇದ್ದಿದ್ದ ಫಲಾಪೇಕ್ಷಿಗಳು, ಫಲಾನುಭವಿಗಳದ್ದು ಖಂಡಿತವಾಗಿ ತಪ್ಪಿತ್ತು ಅಂತ ನನಿಗೆ ಅನ್ನಿಸಿತು. ದುಡ್ಡು ಕೊಟ್ಟು ನಾವು ನಿಜವಾಗಲೂ ದೇವರನ್ನ ನೋಡೋಕೆ ಆಗುತ್ತ????? ಇನ್ನಾ ನನಿಗೆ ಗೊತ್ತಾಗಲಿಲ್ಲ. ನಿಮಗೇನಾದರೂ ಗೊತ್ತಾದರೆ ನೀವೂ ಒಂದು ಥಿಯೇಟರ್ ಶುರುಮಾಡ್ಬಿಡಿ :-)
ನಮಗೇ ಥಿಯೇಟರ್ರೇ ದೇವಾಲಯ, ದೇವರು ನಾನು ಪ್ರತ್ಯಕ್ಷವಾಗ್ತೀನಿ ಬಾ ಅಂದ್ರು ಸಿನಿಮಾ ಮುಗಿದ ಮೇಲೆ ಬಾ ಎಂದು ಹೇಳಿಕಳುಹಿಸೋರು. ದೇವಸ್ಥಾನವನ್ನು ಥಿಯೇಟರ್ ಎಂದು ಅದೇಕೆ ಥಿಯೇಟರ್ ನ ಡಿ ಗ್ರೇಡ್ ಮಾಡಿರೋದು ನೀವು. ನಾನು ಮುಷ್ಕರ ಹೂಡ್ತೀನಿ :-)
ReplyDeleteಯೋಗರಾಜ್ ಭಟ್ಟರ ಹಾಡು ನೆನಪಾಯ್ತು, ಆತ್ಮ ಶಾಂತಿ ಅಂಗಡಿಗಳು ದೇವರ ಮೊಬೈಲ್ ನಂಬರ್ ಗಳು, ಹಪ್ಪಳ ಸಂಡಿಗೆ ಹುಟ್ಟು ಸಾವು ಸ್ಯಾಂಪಲ್ಲುಗಳು :-)
haha... yavdannu degrade madilla.. intha duplicate theatergalu ive antha thorskottidivi ashte :-)
Deleteha ha ha..hemanth namdond theater ide adre free .. ticket enilla... :) yar bandru avrge uchitha darshana... :)
ReplyDelete:-) uchitha oota hakso hagidre heli darshana beda manele eshtond CD ide movie nodakke theater hogod bitbittidivi :-)
Deleteuchitha oota nu ide ,, haksthivi... :)
ReplyDelete